objective idealism
ನಾಮವಾಚಕ

ವಸ್ತುನಿಷ್ಟ ಭಾವನಾವಾದ; ವಸ್ತುಭೂತ, ವಾಸ್ತವಿಕ–ಭಾವನಾವಾದ; ಪಾರಮಾರ್ಥಿಕ ದೃಷ್ಟಿಯಿಂದ ಎಂದರೆ ಅಂತಿಮ ವಿಶ್ಲೇಷಣೆಯಲ್ಲಿ ನಿಸರ್ಗವು ಭಾವನಾರೂಪದ್ದಾದರೂ ವ್ಯವಹಾರದಲ್ಲಿ ಅದು ಜ್ಞಾತೃವಿಗೆ ಅಧೀನವಾಗಿರದೆ ಸ್ವತಂತ್ರ ಅಸ್ತಿತ್ವವುಳ್ಳದ್ದೆಂದು ಪ್ರತಿಪಾದಿಸುವ ಸಿದ್ಧಾಂತ; ನಿಸರ್ಗವೆಂಬುದು ಇಂದ್ರಿಯಗೋಚರವಾದ ಮನೋವ್ಯಾಪಾರ ಹಾಗೂ ತದ್ವಿರುದ್ಧವಾಗಿ, ಇಂದ್ರಿಯಗೋಚರವಾದ ಮನೋವ್ಯಾಪಾರವೇ ನಿಸರ್ಗ ಎಂದು ಪ್ರತಿಪಾದಿಸುವ ಎಹ್‍. ಡಬ್ಲ್ಯೂ. ಜೆ. ವಾನ್‍ ಷೆಲಿಂಗ್‍ ಎಂಬ ಜರ್ಮನ್‍ ತತ್ತ್ವ ಶಾಸ್ತ್ರಜ್ಞನ ಸಿದ್ಧಾಂತ.